ಇವರು ಲಿಬಿಯಾದವರು. ಇವರು ದುಬೈನಲ್ಲಿ ಜರುಗಿದ ಅಂತರಾಷ್ಟ್ರೀಯ ಕುರ್ ಆನ್ ಪಾರಾಯಣ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ.
ಯಮನ್ ನ ಕುರ್ ಆನ್ ಪಾರಾಯಣಗಾರರು. ಇವರು ಉಸಾಮಃ ಇಬ್ನ್ ಝೈದ್ ಮಸೀದಿಯಲ್ಲಿ ಕುರ್ ಆನ್ ಕಂಠಪಾಠವನ್ನು ಕಲಿಸುತ್ತಿದ್ದರು. ಈಗ ಇವರು ಸನ್ಆದಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿದ್ದಾರೆ.
ಇವರು 1963ರಲ್ಲಿ ಮೊರೊಕ್ಕೋದಲ್ಲಿ ಹುಟ್ಟಿದರು. ಇವರು ಕಾಸಾಬ್ಲಾಂಕಾದ ಅಸ್ಸಬೀಲ್ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿದ್ದಾರೆ. ಕುರ್ ಆನನ್ನು ಮನೆಯಲ್ಲೇ ಕುಳಿತು ಕಂಠಪಾಠ ಮಾಡಿರಿ ಎಂಬ ಯೋಜನೆಯ ಸ್ಥಾಪಕರು. ಇವರು ತಜ್ವೀದಿನ ವಿಷಯದಲ್ಲಿ ಗ್ರಂಥವನ್ನೂ ಬರೆದಿದ್ದಾರೆ.
ಇವರು 1967ರಲ್ಲಿ ಮೊರೊಕ್ಕೋದಲ್ಲಿ ಹುಟ್ಟಿದರು. ಇವರು ಕಾಸಾಬ್ಲಾಂಕಾದಲ್ಲಿರುವ ಮಸೀದಿಯ ಇಮಾಮ್ ಮತ್ತು ಖತೀಬರಾಗಿದ್ದಾರೆ. ಒಂಬತ್ತನೇ ವರ್ಷದಲ್ಲೇ ಇವರು ಕುರ್ ಆನ್ ಕಂಠಪಾಠ ಮಾಡಿದ್ದಾರೆ. ಮೊರೊಕ್ಕೋದ ಹಿರಿಯ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರು.
ಅಲ್ಜೀರಿಯಾದ ಕುರ್ ಆನ್ ಪಾರಾಯಣಗಾರರು.
ಅಬ್ದುಲ್ ಅಲೀ ಇಬ್ನ್ ತಾಹಿರ್ ಅಅನೂನ್. ಇವರು 1947ರಲ್ಲಿ ಮೊರೊಕ್ಕೋದ ಫಾಸ್ ನಲ್ಲಿ ಹುಟ್ಟಿದರು. ಇವರು ಕುರ್ ಆನ್ ಪಾರಾಯಣದಲ್ಲಿ ಇಜಾಝಃ ಪಡೆದುಕೊಂಡಿದ್ದಾರೆ. ಇವರು ತಜ್ವೀದ್ ನ ವಿಷಯದಲ್ಲಿ ಬಹಳ ಪಳಗಿದವರಾಗಿದ್ದಾರೆ. ಈ ವಿಷಯದಲ್ಲಿ ಇವರು ಅನೇಕ ತರಗತಿಗಳನ್ನು ನಡೆಸಿದ್ದಾರೆ ಮತ್ತು ಗ್ರಂಥಗಳನ್ನೂ ಬರೆದಿದ್ದಾರೆ.
ಇವರು 1969ರಲ್ಲಿ ಅಲ್ಜೀರಿಯಾದಲ್ಲಿ ಹುಟ್ಟಿದರು. ರಸಾಯನಶಾಸ್ತ್ರದಲ್ಲಿ ಇವರು ಬ್ಯಾಚುಲರ್ ಪದವಿಯನ್ನು ಪಡೆದಿದ್ದಾರೆ. ನಂತರ ಇವರು ಅಧ್ಯಯನಕ್ಕಾಗಿ ಶರೀಅತ್ ಕಾಲೇಜಿನ ಉಸೂಲುದ್ದೀನ್ ವಿಭಾಗಕ್ಕೆ ಸೇರಿದರು. ಇವರು ವರ್ಶ್ ರವರು ವರದಿ ಮಾಡಿದ ಕುರ್ ಆನನ್ನು ಪಾರಾಯಣ ಮಾಡಿ ಧ್ವನಿಮುದ್ರಣಗೊಳಿಸಿದ ಮೊಟ್ಟಮೊದಲ ವ್ಯಕ್ತಿಯಾಗಿದ್ದಾರೆ.
No Description
No Description
ಮೊರೊಕ್ಕೋದ ಕುರ್ ಆನ್ ಪಾರಾಯಣಗಾರರು.