ಮೊರೊಕ್ಕೋದ ಪ್ರಸಿದ್ಧ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರು.
ಇವರು ರಿಯಾದ್ ನಲ್ಲಿರು ಜಾಮಿಉಲ್ ಅಮೀರ್ ನಲ್ಲಿ ಇಮಾಮರಾಗಿದ್ದಾರೆ.
ಈಜಿಪ್ಟಿನ ಕುರ್ ಆನ್ ಪಾರಾಯಣಗಾರರು. ಇವರು ಅರ್ರೀಮ್ ಮಸೀದಿಯ ಇಮಾಮ್ ಮತ್ತು ಖತೀಬರಾಗಿದ್ದಾರೆ.
ಅಹ್ಮದ್ ಅಬ್ದುಲ್ ಫತ್ತಾಹ್ ಮುಹಮ್ಮದ್ ಅಲ್ ಹದ್ದಾದ್. ಇವರು ಈಜಿಪ್ಟಿನ ಕುರ್ ಆನ್ ಪಾರಾಯಣಗಾರರು. ಇವರು 25-8-1984ರಲ್ಲಿ ಹುಟ್ಟಿದರು. ಇವರು ವಿವಿಧ ವಿಷಯಗಳಲ್ಲಿ ಡಾಕ್ಟರೇಟ್ ಮತ್ತು ಮಾಸ್ಟರ್ ಪದವಿಗಳನ್ನು ಪಡೆದಿದ್ದಾರೆ. ಕುರ್ ಆನ್ ಪಾರಾಯಣದ ವಿಷಯದಲ್ಲೂ ಇಜಾಝತ್ತನ್ನು ಪಡೆದಿದ್ದಾರೆ.
ಶೀರಾಝ್ ಇಬ್ನ್ ಅಬ್ದುರ್ರಹ್ಮಾನ್ ಇಬ್ನ್ ತಾಹಿರ್ ಇಬ್ನ್ ಹಸನ್ ಅಲ್ ಕೂಫೀ ಅಲ್ ಕುರ್ದೀ ಅಶ್ಶಾಫಿಈ. ಇವರು 1968ರಲ್ಲಿ ಇರಾಕಿನ ಮೂಸುಲ್ ನಲ್ಲಿ ಹುಟ್ಟಿದರು. ಇವರು ಇರಾಕ್ ಮತ್ತು ಹೊರಗಿನ ಅನೇಕ ಪಾರಾಯಣಗಾರರಿಂದ ಕುರ್ ಆನ್ ಪಾರಾಯಣವನ್ನು ಕಲಿತರು. ಇವರು ಇರಾಕ್, ಯಮನ್, ಯು.ಎ.ಇಯ ಅನೇಕ ಮಸೀದಿಗಳಲ್ಲಿ ಇಮಾಮ್ ಆಗಿ ಕೆಲಸ ಮಾಡಿದ್ದಾರೆ.
ಈಜಿಪ್ಟಿನ ಪಾರಾಯಣಗಾರರು. 1984ರಲ್ಲಿ ಜನನ. ಇವರು ಅಲ್ ಅಝ್ ಹರ್ ವಿಶ್ವವಿದ್ಯಾನಿಲಯದಿಂದ ಅನೇಕ ಇಜಾಝತ್ ಗಳನ್ನು ಪಡೆದಿದ್ದಾರೆ.
ಬೋಸ್ನಿಯಾ ಮೂಲದ ಕುರ್ ಆನ್ ಪಾರಾಯಣಗಾರರು.
ಭಾರತದ ದಯೂಬಂದ್ ನಲ್ಲಿರುವ ದಾರುಲ್ ಉಲೂಮ್ ವಿಶ್ವವಿದ್ಯಾನಿಲಯದಲ್ಲಿ ಹದೀಸ್ ಪ್ರಾಧ್ಯಾಪಕರು. ಭಾರತೀಯ ವಿದ್ವಾಂಸರ ಸಂಘಟನೆಯ ಅಧ್ಯಕ್ಷರು.
ಇಮಾದ್ ಝುಹೈರ್ ಅಬ್ದುಲ್ ಕಾದಿರ್ ಹಾಫಿಝ್. ಇವರು ಹಿ. 1382ರಲ್ಲಿ ಮದೀನಾ ಮುನವ್ವರದಲ್ಲಿ ಹುಟ್ಟಿದರು. ಇವರು ಹಿ. 1412ರಲ್ಲಿ ಮದೀನಾ ವಿಶ್ವವಿದ್ಯಾನಿಲಯದಿಂದ ತಫ್ಸೀರ್ ನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಇವರು ಅಂಬರಿಯ್ಯಃದಲ್ಲಿರುವ ಮನಾರತೈನ್ ಮಸೀದಿಯಲ್ಲಿ ಖತೀಬ್ ಮತ್ತು ಇಮಾಮರಾಗಿ ಮತ್ತು ಮದೀನದ ಕುಬಾ ಮಸೀದಿಯಲ್ಲಿ ಖತೀಬ್ ಮತ್ತು ಇಮಾಮರಾಗಿ ಕೆಲಸ ಮಾಡಿದ್ದಾರೆ. ಇವರನ್ನು ಹಿ. 1432ರ ರಮದಾನ್ ನಲ್ಲಿ ಮದೀನಾ ಮಸೀದಿಯಲ್ಲಿ ತರಾವೀಹ್ ನಮಾಝ್ ನ ಇಮಾಮರಾಗಿ ನೇಮಿಸಲಾಗಿದೆ.
ಜಝಾ ಇಬ್ನ್ ಫಲೀಹ್ ಅಸ್ಸುವೈಲಿಹ್. ಇವರು 1969ರಲ್ಲಿ ಕುವೈತಿನಲ್ಲಿ ಹುಟ್ಟಿದರು. ಇವರು ಕುವೈತಿನ ಪ್ರಸಿದ್ಧ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರಾಗಿದ್ದಾರೆ. ಕುವೈತ್ ವಿಶ್ವವಿದ್ಯಾನಿಲಯದ ಕುಲ್ಲಿಯ್ಯತು ಶ್ಶರೀಅತಿ ವದ್ದಿರಾಸಾತಿಲ್ ಇಸ್ಲಾಮಿಯ್ಯಃ ದಿಂದ ಪದವಿಯನ್ನು ಪಡೆದಿದ್ದಾರೆ. ಇವರು ಈಗ ಅದೇ ವಿಶ್ವವಿದ್ಯಾನಿಯಲದಲ್ಲಿ ಕುರ್ ಆನ್ ಪಾರಾಯಣ ಮತ್ತು ತಜ್ವೀದಿನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.