×
Image

ಇಬ್ನ್ ಅಬ್ಬಾಸ್(ರ) ಮತ್ತು ಖವಾರಿಜ್ ಗಳ ಮಧ್ಯೆ ಜರುಗಿದ ಒಂದು ಮಹಾ ಸಂವಾದ - (ಕನ್ನಡ)

ಇಸ್ಲಾಮಿನಿಂದ ಹೊರಹೋದ ಖವಾರಿಜ್ ಗಳ ಗುಂಪು ಮತ್ತು ಪ್ರಸಿದ್ಧ ಸಹಾಬಿವರ್ಯರಾದ ಇಬ್ನ್ ಅಬ್ಬಾಸ್(ರ)ರವರ ಮಧ್ಯೆ ಜರುಗಿದ ಒಂದು ಮಹಾ ಸಂವಾದದ ವಿವರಣೆ.

Image

ವಿಧಿಯನ್ನು ಹಳಿಯ ಬೇಡಿ - (ಕನ್ನಡ)

ಲೇಖಕರು ಈ ಕೃತಿಯಲ್ಲಿ ವಿಧಿಯ ವಾಸ್ತವಿಕತೆಯ ಬಗ್ಗೆ ವಿವರಿಸುತ್ತಾ ವಿಧಿಯನ್ನು ಹಳಿಯುವುದು ಅಲ್ಲಾಹನನ್ನು ಹಳಿಯುದಕ್ಕೆ ಸಮ ಎನ್ನುತ್ತಾರೆ. ಕಾರಣ ವಿಧಿಯನ್ನು ನಿರ್ಣಯಿಸುವವನು ಅಲ್ಲಾಹು. ಈ ಜಗತ್ತಿನಲ್ಲಿ ಅವನ ಇಚ್ಛೆ ಮತ್ತು ಅರಿವಿನ ವಿನಾಃ ಏನೂ ಸಂಭವಿಸುವುದಿಲ್ಲ. ಒಳಿತು ಮತ್ತು ಕೆಡುಕು ಎಲ್ಲವೂ ಅಲ್ಲಾಹನ ನಿರ್ಣಯ ಪ್ರಕಾರವೇ ಉಂಟಾಗುತ್ತದೆ. ಪ್ರತಿಯೊಂದರಲ್ಲೂ ಅವನಿಗೆ ಯುಕ್ತಿಯಿದೆ. ಆ ಯುಕ್ತಿಯೇನೆಂದು ತಿಳಿಯಲು ಕೆಲವೊಮ್ಮೆ ನಮಗೆ ಸಾಧ್ಯವಾಗಲಾರದು. ಆದುದರಿಂದಲೇ ವಿಧಿಯನ್ನು ಹಳಿಯುವುದನ್ನು ಇಸ್ಲಾಂ ವಿರೋಧಿಸುತ್ತದೆ.

Image

ಶೈತಾನನ ಅನಾವರಣ - (ಕನ್ನಡ)

ಶೈತಾನನ ಕಾಪಟ್ಯತೆ, ತಂತ್ರ ಹಾಗೂ ಉಪಾಯಗಳು ಯಾವ್ಯಾವುದು? ಹೇಗೆ ಆತನು ಮನುಷ್ಯಾತ್ಮವನ್ನು ಪ್ರವೇಶಿಸಿ, ಪಾಪ ಹಾಗೂ ಅತಿಕ್ರಮಗಳತ್ತ ಮನುಷ್ಯನನ್ನು ಕೊಂಡೊಯ್ಯುತ್ತಾನೆ? ಸುಳ್ಳು ಆಶ್ವಾಸನೆಗಳು ಹಾಗೂ ಅತ್ಯಾಶೆಗಳನ್ನು ಹುಟ್ಟಿಸಿ, ಹೃದಯ ಹಾಗೂ ಆತ್ಮಗಳನ್ನು ಭ್ರಷ್ಠಗೊಳಿಸುವಂತಹ ರೀತಿಯಲ್ಲಿ ಶೈತಾನನು ಹೇಗೆ ಮನುಷ್ಯನನ್ನು ಹುರಿದುಂಬಿಸುತ್ತಾನೆ? ನಾವು ಶೈತಾನನ್ನು ಸೋಲಿಸಬಲ್ಲವರಾಗಿದ್ದೇವೆಯೇ?. ಮೇಲಿನ ಗಂಭೀರ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಉತ್ತರ ನೀಡುತ್ತಾ ಮತ್ತು ಅಲ್ಲಾಹನು ಶೈತಾನನನ್ನು ಯಾತಕ್ಕಾಗಿ ಸೃಷ್ಟಿಸಿದನು? ಎಂಬಿತ್ಯಾದಿ ವಿಷಯಗಳಲ್ಲಿರುವ ಸಂಶಯಗಳನ್ನು ಈ ಪುಸ್ತಕವು ನಿವಾರಿಸಲಿದೆ.

Image

ಮರಣ ಮತ್ತು ಮರಣಾನಂತರ ಜೀವನ; ಇಸ್ಲಾಮಿನ ದೃಷ್ಟಿಕೋನದಲ್ಲಿ - (ಕನ್ನಡ)

ಮರಣದ ಕುರಿತು ಕೆಲವು ಉದ್ಭೋಧನೆಗಳ ಕಿರುಪತ್ರ. ಇದರಲ್ಲಿ ಮರಣದ ನೆನಪು, ಅದರ ವಿವರಣೆ, ಮರಣಾನಂತರ ಜೀವನ, ಅಂತ್ಯದಿನದ ಕೆಲವು ಭಯಾನಕ ಸನ್ನಿವೇಶಗಳನ್ನು ಉಲ್ಲೇಖಿಸಲಾಗಿವೆ. ಇದನ್ನು ಮುದ್ರಿಸಿ ಸಾರ್ವಜನಿಕ ಸ್ಥಳಗಳಲ್ಲಿ ವಿತರಿಸುವುದು ಉತ್ತಮವಾಗಿದೆ.