×
Image

ವಿಶ್ವ ಸಹೋದರತೆ - (ಕನ್ನಡ)

ಅಲ್ಲಾಹನ ಬಳಿ ಅತ್ಯುತ್ತಮನಾದ ವ್ಯಕ್ತಿ ಯಾರು ? ಮಾತಾಪಿತರೊಂದಿಗೆ ಹೇಗೆ ವರ್ತಿಸಬೇಕು ಅನಾಥರ ಪರಿಪಾಲನೆಯ ಕುರಿತು ಮತ್ತು ಪುರಾಣಗಳಲ್ಲಿಯ ಏಕ ದೈವತ್ವದ ಪ್ರಸ್ತಾಪ , ಇಸ್ಲಾಮಿನಲ್ಲಿ ಸಹೋದರತೆ ಹಾಗೂ ಬಾಂಧವ್ಯ ಬೆಳೆಸುವ ವಿವಿಧ ವಿಷಯಗಳ ಕುರಿತ ಭಾಷಣ.

Image

ಮುಕ್ತಿಯ ಮಾರ್ಗ - (ಕನ್ನಡ)

ಮುಕ್ತಿಯ ಮಾರ್ಗ ಎಂಬ ಕಿರುಹೊತ್ತಿಗೆಯು ವಾಚಕನಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತದೆ. ಲೇಖಕರು ಇಸ್ಲಾಮಿನ ಮಹಿಮೆಗಳನ್ನು ಇಸ್ಲಾಮನ್ನು ಇತರ ಧರ್ಮಗಳೊಂದಿಗಿನ ತುಲನಾತ್ಮಕ ಅಧ್ಯಯನ ಹಾಗೂ ಬುದ್ಧಿ ಮತ್ತು ಗ್ರಂಥಗಳ ಆಧಾರದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಪುಸ್ತಕವು ವಿಶೇಷತಃ ಮುಸ್ಲಿಮೇತರರ ನಡುವೆ ಇಸ್ಲಾಮನ್ನು ಪರಿಚಯ ಮಾಡಿಕೊಡುವ ಅತ್ಯಂತ ಸಮರ್ಪಕ ರಚನೆಯಾಗಿದೆ.

Image

ಅಲ್ಲಾಹು ಅನುಗ್ರಹಿಸಿದವರ ಮಾರ್ಗ - (ಕನ್ನಡ)

ಅಲ್ಲಾಹನಿಂದ ಲಭಿಸಿದ ಅನುಗ್ರಹಗಳಿಗೆ ಮನುಷ್ಯನು ಕೃತಜ್ಞತೆ ಸಲ್ಲಿಸಬೇಕು. ಅಲ್ಲಾಹನ ಕೋಪಕ್ಕೆ ಪಾತ್ರರಾದವರು ಮತ್ತು ದಾರಿ ತಪ್ಪಿದವರ ಮಾರ್ಗ ಯಾವುದು? ಅವನು ಅನುಗ್ರಹಿಸಿದವರು ಯಾರು? ನಾವು ಯಾರನ್ನು ಅನುಸರಿಸಿ ಶಾಶ್ವತ ಮೋಕ್ಷವನ್ನು ಪಡೆಯ ಬೇಕು? ಪ್ರಾರ್ಥನೆ ಮತ್ತು ಆರಾಧನೆಗಳನ್ನೂ ನಾವು ಅಲ್ಲಾಹನೊಡನೆ ಮಾತ್ರ ಮಾಡ ಬೇಕಾಗಿರುವದು ಏಕೆ? ಮುಂತಾದ ಹಲವಾರು ಉಪದೇಶಗಳ ಭಾಷಣ

Image

ಕುರ್ ಆನ್ - ವಿಜ್ಞಾನಿಗಳು ಕಂಡಂತೆ - (ಕನ್ನಡ)

ಕುರ್ ಆನ್ ನಲ್ಲಿರುವ ಅನೇಕ ವೈಜ್ಞಾನಿಕ ಸತ್ಯ ಸಂಗತಿಗಳನ್ನು ಆಧುನಿಕ ವಿಜ್ಞಾನವು ದೃಢೀಕರಿಸಿದೆ ಮತ್ತು ಈ ಸತ್ಯ ಸಂಗತಿಗಳು ಮುಹಮ್ಮದ್(ಸ)ರಿಗೆ ಸೃಷಿಕರ್ತನಾದ ಅಲ್ಲಾಹನಿಂದ ಮಾತ್ರ ಲಭ್ಯವಾಗಿರಲು ಸಾಧ್ಯವೆಂದು ಆಧುನಿಕ ವಿಜ್ಞಾನಿಗಳು ಒಪ್ಪಿಕೊಳ್ಳುವುದನ್ನು ಈ ವೀಡಿಯೋ ವಿವರಿಸುತ್ತದೆ.

Image

ಸ್ವದಖ: ಮಹತ್ವ ಮತ್ತು ಶ್ರೇಷ್ಟತೆ - (ಕನ್ನಡ)

ಅಲ್ಲಾಹನ ಅನುಗ್ರಹವಾದ ಸಂಪತ್ತನ್ನು ಅವನು ಇಚ್ಚಿಸುವವರಿಗೆ ಅಗಣಿತವಾಗಿ ನೀಡುವನು. ಸಂಪತ್ತನ್ನು ಅಲ್ಲಾಹನ ನಿಯಮಗಳಿಗೆ ವಿಧೇಯರಾಗಿದ್ದುಕೊಂಡು ಸಂಪಾದಿಸಬೇಕು ಮತ್ತು ಖರ್ಚು ಮಾಡಬೇಕು. ಸ್ವದಖ:ಗಳ ಮಹತ್ವ, ಶ್ರೇಷ್ಟತೆ ಮತ್ತು ದಾನ ಮಾಡುವವರಿಗೆ ಲಭಿಸುವ ಅತ್ಯಂತ ಪ್ರತಿಫಲಗಳ ಕುರಿತು ವಿವರಿಸುತ್ತದೆ.