×
Image

ಕುಟುಂಬ ಸಂಬಂಧ ಜೋಡಣೆ: ಪರಿಕಲ್ಪನೆ, ಶ್ರೇಷ್ಠತೆಗಳು, ಶಿಷ್ಟಾಚಾರಗಳು ಮತ್ತು ವಿಧಿಗಳು. ಕುರ್’ಆನ್ ಮತ್ತು ಸುನ್ನತ್ತಿನ ಬೆಳಕಿನಲ್ಲಿ - (ಕನ್ನಡ)

ಲೇಖಕರು ಹೇಳುತ್ತಾರೆ: ಇದು ಕುಟುಂಬ ಸಂಬಂಧ ಜೋಡಣೆ ಎಂಬ ವಿಷಯದ ಬಗ್ಗೆ ಬರೆದ ಒಂದು ಸಂಕ್ಷಿಪ್ತ ಕೃತಿ. ಇದರಲ್ಲಿ ನಾನು ಕುಟುಂಬ ಸಂಬಂಧ ಜೋಡಣೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ಮತ್ತು ಕುಟುಂಬ ಸಂಬಂಧ ವಿಚ್ಛೇದನೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ವಿವರಿಸಿದ್ದೇನೆ. ನಂತರ ಕುಟುಂಬ ಸಂಬಂಧ ಜೋಡಿಸುವುದು ಕಡ್ಡಾಯವಾಗಿದೆ ಹಾಗೂ ಕುಟುಂಬ ಸಂಬಂಧ ವಿಚ್ಛೇದಿಸುವುದು ನಿಷಿದ್ಧವಾಗಿದೆ ಎಂಬ ವಿಷಯಕ್ಕೆ ಕುರ್’ಆನ್ ಮತ್ತು ಸುನ್ನತ್ತಿನಲ್ಲಿರುವ ಪುರಾವೆಗಳನ್ನು ಉಲ್ಲೇಖಿಸಿದ್ದೇನೆ.

Image

ವಿಧಿಯನ್ನು ಹಳಿಯ ಬೇಡಿ - (ಕನ್ನಡ)

ಲೇಖಕರು ಈ ಕೃತಿಯಲ್ಲಿ ವಿಧಿಯ ವಾಸ್ತವಿಕತೆಯ ಬಗ್ಗೆ ವಿವರಿಸುತ್ತಾ ವಿಧಿಯನ್ನು ಹಳಿಯುವುದು ಅಲ್ಲಾಹನನ್ನು ಹಳಿಯುದಕ್ಕೆ ಸಮ ಎನ್ನುತ್ತಾರೆ. ಕಾರಣ ವಿಧಿಯನ್ನು ನಿರ್ಣಯಿಸುವವನು ಅಲ್ಲಾಹು. ಈ ಜಗತ್ತಿನಲ್ಲಿ ಅವನ ಇಚ್ಛೆ ಮತ್ತು ಅರಿವಿನ ವಿನಾಃ ಏನೂ ಸಂಭವಿಸುವುದಿಲ್ಲ. ಒಳಿತು ಮತ್ತು ಕೆಡುಕು ಎಲ್ಲವೂ ಅಲ್ಲಾಹನ ನಿರ್ಣಯ ಪ್ರಕಾರವೇ ಉಂಟಾಗುತ್ತದೆ. ಪ್ರತಿಯೊಂದರಲ್ಲೂ ಅವನಿಗೆ ಯುಕ್ತಿಯಿದೆ. ಆ ಯುಕ್ತಿಯೇನೆಂದು ತಿಳಿಯಲು ಕೆಲವೊಮ್ಮೆ ನಮಗೆ ಸಾಧ್ಯವಾಗಲಾರದು. ಆದುದರಿಂದಲೇ ವಿಧಿಯನ್ನು ಹಳಿಯುವುದನ್ನು ಇಸ್ಲಾಂ ವಿರೋಧಿಸುತ್ತದೆ.