×
Image

ವಿಧಿಯನ್ನು ಹಳಿಯ ಬೇಡಿ - (ಕನ್ನಡ)

ಲೇಖಕರು ಈ ಕೃತಿಯಲ್ಲಿ ವಿಧಿಯ ವಾಸ್ತವಿಕತೆಯ ಬಗ್ಗೆ ವಿವರಿಸುತ್ತಾ ವಿಧಿಯನ್ನು ಹಳಿಯುವುದು ಅಲ್ಲಾಹನನ್ನು ಹಳಿಯುದಕ್ಕೆ ಸಮ ಎನ್ನುತ್ತಾರೆ. ಕಾರಣ ವಿಧಿಯನ್ನು ನಿರ್ಣಯಿಸುವವನು ಅಲ್ಲಾಹು. ಈ ಜಗತ್ತಿನಲ್ಲಿ ಅವನ ಇಚ್ಛೆ ಮತ್ತು ಅರಿವಿನ ವಿನಾಃ ಏನೂ ಸಂಭವಿಸುವುದಿಲ್ಲ. ಒಳಿತು ಮತ್ತು ಕೆಡುಕು ಎಲ್ಲವೂ ಅಲ್ಲಾಹನ ನಿರ್ಣಯ ಪ್ರಕಾರವೇ ಉಂಟಾಗುತ್ತದೆ. ಪ್ರತಿಯೊಂದರಲ್ಲೂ ಅವನಿಗೆ ಯುಕ್ತಿಯಿದೆ. ಆ ಯುಕ್ತಿಯೇನೆಂದು ತಿಳಿಯಲು ಕೆಲವೊಮ್ಮೆ ನಮಗೆ ಸಾಧ್ಯವಾಗಲಾರದು. ಆದುದರಿಂದಲೇ ವಿಧಿಯನ್ನು ಹಳಿಯುವುದನ್ನು ಇಸ್ಲಾಂ ವಿರೋಧಿಸುತ್ತದೆ.

Image

ನಾಲಗೆಯ ವಿಪತ್ತುಗಳು - (ಕನ್ನಡ)

ಅಲ್ಲಾಹುವಿನ ಅನುಗ್ರಹವಾದ ನಾಲಗೆಯನ್ನು ಮಾನವನು ತನ್ನ ನಾಶಕ್ಕೆ ಬಳಸದೆ ಅದನ್ನು ಅವನ ಸುರಕ್ಷಿತತೆಗೆ ಹೇಗೆ ಬಳಸಬೇಕು ಎಂಬುದನ್ನು ವಿವರಿಸುವ ಲಘು ಕೃತಿ. ಸುಳ್ಳು, ಚಾಡಿ, ಪರನಿಂದೆ ಮುಂತಾದ ದುರ್ಗುಣಗಳಿಂದ ಸತ್ಯವಿಶ್ವಾಸಿಗಳು ದೂರ ನಿಲ್ಲಬೇಕಾದ ಅನಿವಾರ್ಯತೆಯನ್ನು ಇದು ತೋರಿಸಿಕೊಡುತ್ತದೆ.