×
Image

ಸರಿಯಾದ ವಿಶ್ವಾಸ ಮತ್ತು ಅದಕ್ಕೆ ವಿರುದ್ಧವಾಗಿರುವ ಕಾರ್ಯಗಳು ಹಾಗೂ ಇಸ್ಲಾಂ ಧರ್ಮವನ್ನು ಅಸಿಂಧುಗೊಳಿಸುವ ವಿಷಯಗಳು - (ಕನ್ನಡ)

ಸರಿಯಾದ ವಿಶ್ವಾಸ ಮತ್ತು ಅದಕ್ಕೆ ವಿರುದ್ಧವಾಗಿರುವ ಕಾರ್ಯಗಳು ಹಾಗೂ ಇಸ್ಲಾಂ ಧರ್ಮವನ್ನು ಅಸಿಂಧುಗೊಳಿಸುವ ವಿಷಯಗಳು

Image

ತೌಹೀದ್: ಅರ್ಥ ಮತ್ತು ವಿವರಣೆ - (ಕನ್ನಡ)

ಅಲ್ಲಾಹು ಸಕಲ ಸಂದೇಶವಾಹಕರಿಗೆ ಹಾಗೂ ಅಂತಿಮ ಪ್ರವಾದಿಗೆ ಕೊಟ್ಟು ಕಳುಹಿಸಿರುವಂತಹ ತೌಹೀದ್ ನ ಅರ್ಥ ಮತ್ತು ವಿವರಣೆಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಒಂದು, ತೌಹೀದ್ ಹಾಗೂ ಅದರ ವಿರುದ್ಧದ ಶಿರ್ಕ್ ನ ವಾಸ್ತವಿಕತೆ. ಎರಡು, ಸಂದೇಶವಾಹಕರುಗಳ ತೌಹೀದ್ ಹಾಗೂ ಅದಕ್ಕೆ ವ್ಯತಿರಿಕ್ತವಾಗಿರುವ ಶಿರ್ಕ್ ಮತ್ತು ಅವಿಶ್ವಾಸ. ಮೂರು, ಅಲ್ಲಾಹುವಿನೊಂದಿಗಿರುವ ಶಿರ್ಕ್ ಎಂಬುದರ ಅರ್ಥದ ವಿವರಣೆ.

Image

ವಿಧಿಯನ್ನು ಹಳಿಯ ಬೇಡಿ - (ಕನ್ನಡ)

ಲೇಖಕರು ಈ ಕೃತಿಯಲ್ಲಿ ವಿಧಿಯ ವಾಸ್ತವಿಕತೆಯ ಬಗ್ಗೆ ವಿವರಿಸುತ್ತಾ ವಿಧಿಯನ್ನು ಹಳಿಯುವುದು ಅಲ್ಲಾಹನನ್ನು ಹಳಿಯುದಕ್ಕೆ ಸಮ ಎನ್ನುತ್ತಾರೆ. ಕಾರಣ ವಿಧಿಯನ್ನು ನಿರ್ಣಯಿಸುವವನು ಅಲ್ಲಾಹು. ಈ ಜಗತ್ತಿನಲ್ಲಿ ಅವನ ಇಚ್ಛೆ ಮತ್ತು ಅರಿವಿನ ವಿನಾಃ ಏನೂ ಸಂಭವಿಸುವುದಿಲ್ಲ. ಒಳಿತು ಮತ್ತು ಕೆಡುಕು ಎಲ್ಲವೂ ಅಲ್ಲಾಹನ ನಿರ್ಣಯ ಪ್ರಕಾರವೇ ಉಂಟಾಗುತ್ತದೆ. ಪ್ರತಿಯೊಂದರಲ್ಲೂ ಅವನಿಗೆ ಯುಕ್ತಿಯಿದೆ. ಆ ಯುಕ್ತಿಯೇನೆಂದು ತಿಳಿಯಲು ಕೆಲವೊಮ್ಮೆ ನಮಗೆ ಸಾಧ್ಯವಾಗಲಾರದು. ಆದುದರಿಂದಲೇ ವಿಧಿಯನ್ನು ಹಳಿಯುವುದನ್ನು ಇಸ್ಲಾಂ ವಿರೋಧಿಸುತ್ತದೆ.

Image

ಇಸ್ರಾಅ ಮತ್ತು ಮಿಅರಾಜ್ ಆಚರಿಸುವುದರ ವಿಧಿ - (ಕನ್ನಡ)

ಇಸ್ರಾಅ ಮತ್ತು ಮಿಅರಾಜಿನ ರಾತ್ರಿಯನ್ನು ಆಚರಿಸುವುದು ಬಿದ್’ಅತ್ ಆಗಿದೆ. ಲೇಖಕರು ಹೇಳುತ್ತಾರೆ: ಇಸ್ರಾಅ ಮತ್ತು ಮಿಅರಾಜ್ ಸಂಭವಿಸಿದ ರಾತ್ರಿಯನ್ನು ಆಚರಿಸುವುದು ಧರ್ಮದಲ್ಲಿ ಒಳಪಟ್ಟಿರುತ್ತಿದ್ದರೆ ಮೊಟ್ಟಮೊದಲು ಸಹಾಬಾಗಳು ಅದನ್ನು ಆಚರಿಸುತ್ತಿದ್ದರು. ಆದರೆ ಅವರಾರೂ ಅದನ್ನು ಆಚರಿಸಿಲ್ಲ. ಆದುದರಿಂದ ಅದು ಧರ್ಮದಲ್ಲಿ ಸೇರಿದ್ದಲ್ಲ ಎನ್ನುವುದು ಸ್ಪಷ್ಟ. ಆ ರಾತ್ರಿಯನ್ನು ಗೌರವಿಸುವುದು ಇಸ್ಲಾಮಿನಲ್ಲಿ ಒಳಪಟ್ಟದ್ದಲ್ಲ.