ಇಸ್ರಾಅ ಮತ್ತು ಮಿಅರಾಜ್ ಆಚರಿಸುವುದರ ವಿಧಿ
ಇಸ್ರಾಅ ಮತ್ತು ಮಿಅರಾಜಿನ ರಾತ್ರಿಯನ್ನು ಆಚರಿಸುವುದು ಬಿದ್’ಅತ್ ಆಗಿದೆ. ಲೇಖಕರು ಹೇಳುತ್ತಾರೆ: ಇಸ್ರಾಅ ಮತ್ತು ಮಿಅರಾಜ್ ಸಂಭವಿಸಿದ ರಾತ್ರಿಯನ್ನು ಆಚರಿಸುವುದು ಧರ್ಮದಲ್ಲಿ ಒಳಪಟ್ಟಿರುತ್ತಿದ್ದರೆ ಮೊಟ್ಟಮೊದಲು ಸಹಾಬಾಗಳು ಅದನ್ನು ಆಚರಿಸುತ್ತಿದ್ದರು. ಆದರೆ ಅವರಾರೂ ಅದನ್ನು ಆಚರಿಸಿಲ್ಲ. ಆದುದರಿಂದ ಅದು ಧರ್ಮದಲ್ಲಿ ಸೇರಿದ್ದಲ್ಲ ಎನ್ನುವುದು ಸ್ಪಷ್ಟ. ಆ ರಾತ್ರಿಯನ್ನು ಗೌರವಿಸುವುದು ಇಸ್ಲಾಮಿನಲ್ಲಿ ಒಳಪಟ್ಟದ್ದಲ್ಲ.