×
Image

ಮುಕ್ತಿಯ ಮಾರ್ಗ - (ಕನ್ನಡ)

ಮುಕ್ತಿಯ ಮಾರ್ಗ ಎಂಬ ಕಿರುಹೊತ್ತಿಗೆಯು ವಾಚಕನಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತದೆ. ಲೇಖಕರು ಇಸ್ಲಾಮಿನ ಮಹಿಮೆಗಳನ್ನು ಇಸ್ಲಾಮನ್ನು ಇತರ ಧರ್ಮಗಳೊಂದಿಗಿನ ತುಲನಾತ್ಮಕ ಅಧ್ಯಯನ ಹಾಗೂ ಬುದ್ಧಿ ಮತ್ತು ಗ್ರಂಥಗಳ ಆಧಾರದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಪುಸ್ತಕವು ವಿಶೇಷತಃ ಮುಸ್ಲಿಮೇತರರ ನಡುವೆ ಇಸ್ಲಾಮನ್ನು ಪರಿಚಯ ಮಾಡಿಕೊಡುವ ಅತ್ಯಂತ ಸಮರ್ಪಕ ರಚನೆಯಾಗಿದೆ.

Image

ಹತ್ತು ಉಪದೇಶಗಳು - (ಕನ್ನಡ)

ಈ ಭಿತ್ತಿಪತ್ರವು ಕುರ್‘ಆನಿನ ಸೂರ ಅನ್ ಆಮ್ ನ 151 ರಿಂದ 153ರ ವರೆಗಿನ ಸೂಕ್ತಿಗಳಲ್ಲಿ ಅಡಗಿರುವ ಹತ್ತು ಉಪದೇಶಗಳನ್ನು ವಿವರಿಸುತ್ತದೆ.

Image

ಹಜ್ಜ್‘ನ ಶ್ರೇಷ್ಠತೆಗಳು, ಅದರ ನಿಬಂಧನೆಗಳು ಮತ್ತು ಅದರ ಕಡ್ಡಾಯತೆ - (ಕನ್ನಡ)

ಲೇಖನವು ಹಜ್ಜ್ ನ ಶ್ರೇಷ್ಠತೆಗಳು, ಅದರ ನಿಬಂಧನೆಗಳು ಮತ್ತು ಅದರ ಕಡ್ಡಾಯತೆಯನ್ನು ವಿವರಿಸುತ್ತದೆ.

Image

ಇಸ್ತಿಗ್ಫಾರ್ ಮಾಡುವ ಅತಿಶ್ರೇಷ್ಠ ವಿಧಾನ - (ಕನ್ನಡ)

ಇಸ್ತಿಗ್ಫಾರ್ ಮಾಡುವ ಅತಿಶ್ರೇಷ್ಠ ವಿಧಾನವನ್ನು ವಿವರಿಸುವ ಹದೀಸಿನ ವ್ಯಾಖ್ಯಾನ ಮತ್ತು ಇಸ್ತಿಗ್ಫಾರ್’ನ ಶ್ರೇಷ್ಠತೆಗಳನ್ನು ಈ ಪುಸ್ತಕವು ಒಳಗೊಂಡಿದೆ.

Image

ಅಲ್ಲಾಹು ಅನುಗ್ರಹಿಸಿದವರ ಮಾರ್ಗ - (ಕನ್ನಡ)

ಅಲ್ಲಾಹನಿಂದ ಲಭಿಸಿದ ಅನುಗ್ರಹಗಳಿಗೆ ಮನುಷ್ಯನು ಕೃತಜ್ಞತೆ ಸಲ್ಲಿಸಬೇಕು. ಅಲ್ಲಾಹನ ಕೋಪಕ್ಕೆ ಪಾತ್ರರಾದವರು ಮತ್ತು ದಾರಿ ತಪ್ಪಿದವರ ಮಾರ್ಗ ಯಾವುದು? ಅವನು ಅನುಗ್ರಹಿಸಿದವರು ಯಾರು? ನಾವು ಯಾರನ್ನು ಅನುಸರಿಸಿ ಶಾಶ್ವತ ಮೋಕ್ಷವನ್ನು ಪಡೆಯ ಬೇಕು? ಪ್ರಾರ್ಥನೆ ಮತ್ತು ಆರಾಧನೆಗಳನ್ನೂ ನಾವು ಅಲ್ಲಾಹನೊಡನೆ ಮಾತ್ರ ಮಾಡ ಬೇಕಾಗಿರುವದು ಏಕೆ? ಮುಂತಾದ ಹಲವಾರು ಉಪದೇಶಗಳ ಭಾಷಣ

Image

ಕುರ್ ಆನ್ - ವಿಜ್ಞಾನಿಗಳು ಕಂಡಂತೆ - (ಕನ್ನಡ)

ಕುರ್ ಆನ್ ನಲ್ಲಿರುವ ಅನೇಕ ವೈಜ್ಞಾನಿಕ ಸತ್ಯ ಸಂಗತಿಗಳನ್ನು ಆಧುನಿಕ ವಿಜ್ಞಾನವು ದೃಢೀಕರಿಸಿದೆ ಮತ್ತು ಈ ಸತ್ಯ ಸಂಗತಿಗಳು ಮುಹಮ್ಮದ್(ಸ)ರಿಗೆ ಸೃಷಿಕರ್ತನಾದ ಅಲ್ಲಾಹನಿಂದ ಮಾತ್ರ ಲಭ್ಯವಾಗಿರಲು ಸಾಧ್ಯವೆಂದು ಆಧುನಿಕ ವಿಜ್ಞಾನಿಗಳು ಒಪ್ಪಿಕೊಳ್ಳುವುದನ್ನು ಈ ವೀಡಿಯೋ ವಿವರಿಸುತ್ತದೆ.

Image

ರಮದಾನಿನ ನಂತರವೇನು ? - (ಕನ್ನಡ)

ರಮಾದಾನ್ ತಿಂಗಳಲ್ಲಿ ವೃತಾನುಷ್ಟಾನ ಮತ್ತು ಸತ್ಕರ್ಮ ಗಳಿಂದ ತುಂಬಿದ ಜೀವನ ನಡೆಸಿ ಅಲ್ಲಾಹನ ಮತ್ತು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಂ ಅವರ ನಿರ್ದೇಶಗಳನ್ನು ಜೀವನದಲ್ಲಿ ಅಳವಡಿಸಿದ ಸತ್ಯ ವಿಶ್ವಾಸಿಗಳು ರಮದಾನಿನ ನಂತರ ಬರುವ ರಮಾದಾನ್ ವರೆಗೂ ಅದೇ ರೀತಿಯ ಜೀವನವನ್ನು ನಡೆಸ ಬೇಕಾಗಿದೆ. ಪಾರತ್ರಿಕ ಜೀವನದಲ್ಲಿ ಅಲ್ಲಾಹ ನು ಮನುಷ್ಯನಲ್ಲಿ ಕೇಳುವ ಐದು ಪ್ರಶ್ನೆಗಳು, ನಾಲಗೆಯ ವಿಪತ್ತುಗಳು, ದ್ವಿಮುಖ ಧೋರಣೆಯ ಕುರಿತು ಪ್ರವಾದಿ ಯು ಹೇಳಿದ ಮಾತುಗಳು, ಮುಂತಾಗಿ ಒಬ್ಬ....

Image

ವಿಧಿಯನ್ನು ಹಳಿಯ ಬೇಡಿ - (ಕನ್ನಡ)

ಲೇಖಕರು ಈ ಕೃತಿಯಲ್ಲಿ ವಿಧಿಯ ವಾಸ್ತವಿಕತೆಯ ಬಗ್ಗೆ ವಿವರಿಸುತ್ತಾ ವಿಧಿಯನ್ನು ಹಳಿಯುವುದು ಅಲ್ಲಾಹನನ್ನು ಹಳಿಯುದಕ್ಕೆ ಸಮ ಎನ್ನುತ್ತಾರೆ. ಕಾರಣ ವಿಧಿಯನ್ನು ನಿರ್ಣಯಿಸುವವನು ಅಲ್ಲಾಹು. ಈ ಜಗತ್ತಿನಲ್ಲಿ ಅವನ ಇಚ್ಛೆ ಮತ್ತು ಅರಿವಿನ ವಿನಾಃ ಏನೂ ಸಂಭವಿಸುವುದಿಲ್ಲ. ಒಳಿತು ಮತ್ತು ಕೆಡುಕು ಎಲ್ಲವೂ ಅಲ್ಲಾಹನ ನಿರ್ಣಯ ಪ್ರಕಾರವೇ ಉಂಟಾಗುತ್ತದೆ. ಪ್ರತಿಯೊಂದರಲ್ಲೂ ಅವನಿಗೆ ಯುಕ್ತಿಯಿದೆ. ಆ ಯುಕ್ತಿಯೇನೆಂದು ತಿಳಿಯಲು ಕೆಲವೊಮ್ಮೆ ನಮಗೆ ಸಾಧ್ಯವಾಗಲಾರದು. ಆದುದರಿಂದಲೇ ವಿಧಿಯನ್ನು ಹಳಿಯುವುದನ್ನು ಇಸ್ಲಾಂ ವಿರೋಧಿಸುತ್ತದೆ.

Image

ಪ್ರವಾದಿಚರ್ಯೆಯ ಬಗ್ಗೆ ಅಕ್ಲಾನಿಗಳ ನಿಲುವು - (ಕನ್ನಡ)

ಪ್ರವಾದಿ ಮುಹಮ್ಮದ್(ಸ)ರವರ ಸುನ್ನತ್ತಿನ ಬಗ್ಗೆ ಅಕ್ಲಾನಿಗಳ ನಿಲುವನ್ನು ಈ ಲೇಖನವು ಬಹಿರಂಗಪಡಿಸುತ್ತದೆ.

Image

ಸ್ವದಖ: ಮಹತ್ವ ಮತ್ತು ಶ್ರೇಷ್ಟತೆ - (ಕನ್ನಡ)

ಅಲ್ಲಾಹನ ಅನುಗ್ರಹವಾದ ಸಂಪತ್ತನ್ನು ಅವನು ಇಚ್ಚಿಸುವವರಿಗೆ ಅಗಣಿತವಾಗಿ ನೀಡುವನು. ಸಂಪತ್ತನ್ನು ಅಲ್ಲಾಹನ ನಿಯಮಗಳಿಗೆ ವಿಧೇಯರಾಗಿದ್ದುಕೊಂಡು ಸಂಪಾದಿಸಬೇಕು ಮತ್ತು ಖರ್ಚು ಮಾಡಬೇಕು. ಸ್ವದಖ:ಗಳ ಮಹತ್ವ, ಶ್ರೇಷ್ಟತೆ ಮತ್ತು ದಾನ ಮಾಡುವವರಿಗೆ ಲಭಿಸುವ ಅತ್ಯಂತ ಪ್ರತಿಫಲಗಳ ಕುರಿತು ವಿವರಿಸುತ್ತದೆ.

Image

ಮೀಲಾದುನ್ನಬಿಯ ಕುರಿತು ನಬಾತಿಯ್ಯ ಖುತ್’ಬಾ - (ಕನ್ನಡ)

ಕೇರಳ ಕರ್ನಾಟಕದ ಮುಸ್ಲಿಮರು ಪ್ರತಿ ಶುಕ್ರವಾರ ಪಾರಾಯಣ ಮಾಡುವ ಇಬ್ನು ನುಬಾತನ ಖುತ್ಬ ಸಂಗ್ರಹದಿಂದ ತಿಳಿದು ಬರುತ್ತದೆ. ರಬೇಉಲ್ ಅವ್ವಲ್ ತಿಂಗಳ ನಾಲ್ಕು ಅಥವಾ ಐದು ಖುತ್ಬಗಳಲ್ಲೂ ಪ್ರವಾದಿಯವರ ಜನನದ ಕುರಿತು ಪ್ರಸ್ತಾಪವಿಲ್ಲ ಮಾತ್ರವಲ್ಲ; ಪ್ರವಾದಿಯವರ ಮರಣದ ಕುರಿತು ಅವುಗಳಲ್ಲಿ ಪ್ರಸ್ತಾಪವಿದೆ. ಇದು ಪ್ರಸ್ತುತ ತಿಂಗಳ ಎರಡು ಖುತ್ಬಗಳ ಕನ್ನಡ ಅನುವಾದವಾಗಿದೆ.