×
ಇದು ಇಮಾಮ್ ಮುಹಮ್ಮದ್ ಇಬ್ನ್ ಅಬ್ದುಲ್ ವಹ್ಹಾಬ್ (ರಹಿಮಹುಲ್ಲಾಹ್) ರಚಿಸಿದ ಸಂಕ್ಷಿಪ್ತವಾದ ಮತ್ತು ಅಮೂಲ್ಯವಾದ ಕೃತಿಯಾಗಿದೆ. ಮನುಷ್ಯನು ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಇದು ಒಳಗೊಂಡಿದೆ. ಉದಾಹರಣೆಗೆ, ಅಲ್ಲಾಹನನ್ನು ಅರಿಯುವುದು, ಅವನು ಆದೇಶಿಸಿದ ವಿವಿಧ ಆರಾಧನೆಗಳ ಬಗ್ಗೆ ಅರಿಯುವುದು, ಇಸ್ಲಾಮ್ ಧರ್ಮವನ್ನು ಅರಿಯುವುದು, ಧರ್ಮದ ವಿವಿಧ ಹಂತಗಳನ್ನು ಮತ್ತು ಅವುಗಳ ಸ್ಥಂಭಗಳನ್ನು ಅರಿಯುವುದು, ಪ್ರವಾದಿ(ಸ)ರವರ ಬಗ್ಗೆ ಅರಿಯುವುದು, ಅವರ ಜೀವನದ ಬಗ್ಗೆ ಮತ್ತು ಅವರನ್ನು ಕಳುಹಿಸಿದ್ದಕ್ಕಿರುವ ಹಿಕ್ಮತ್ತನ್ನು ಅರಿಯುವುದು, ಪುನರುತ್ಥಾನದಲ್ಲಿರುವ ವಿಶ್ವಾಸ ಮತ್ತು ತೌಹೀದಿನ ಎರಡು ಸ್ಥಂಭಗಳಾದ ತಾಗೂತ್ ಗಳನ್ನು ವರ್ಜಿಸುವುದು ಮತ್ತು ಅಲ್ಲಾಹನ ವಿಶ್ವಾಸವಿಡುವುದು ಮೊದಲಾದ ಅನೇಕ ವಿಷಯಗಳನ್ನು ಇದು ಒಳಗೊಂಡಿದೆ.